ಓ ಎನ್ನು ಬಾ ಗಣಪಾ
ಓ ಎನ್ನು ಬಾ ಗಣಪಾ ಕರೆದಾಗ
ಓ ಎನ್ನು ಬಾ ಗಣಪಾ
ಓಂಕಾರ ನಾದಲೋಲ ಹೇ ಗಣಪಾ
ಓಂಕಾರ ರೂಪ ಹೇ ಗಣಪಾ
ಮಾಯಾ ವಿನಾಶಕ ಮೂಷಿಕ ವಾಹನ
ಮಾತಾ ಭವಾನಿ ಪಾರ್ವತಿ ನಂದನ
ಮಹಾಗಣಪತೇ ಪರಮ ದಯಾಘನ
ಶಂಭೋ ನಂದನ ಕರೆವೆನು ನಾ
ಗಜಮುಖದವನೇ ಗಣಗಳಿಗೊಡೆಯ
ಮೊದಲ ಪೂಜೆಯನು ಪಡೆಯುವ ದೇವನೇ
ಆತ್ಮಲಿಂಗವನು ಧರೆಯಲಿ ಇಟ್ಟವನೆ
ಬಾಲ ಗಣೇಶನೇ ಕರೆವೆನು ನಾ
ಓ ಎನ್ನು ಬಾ ಗಣಪಾ ಕರೆದಾಗ
ಓ ಎನ್ನು ಬಾ ಗಣಪಾ
*************************************************************