ಪಾರ್ವತಿ ತಪಸಿನ ಪುಣ್ಯಫಲ
ಪಾರ್ವತಿ ತಪಸಿನ ಪುಣ್ಯಫಲ
ಗಣಪತಿ ಎಂಬ ಮಹಾಬಲ
ಎಲ್ಲ ಬಲ್ಲ ಈ ವಲ್ಲಭನು
ವೀರಾಗ್ರಣಿಗಳ ವೀರನು
ಮೋದಕ ಹಸ್ತದ ಮೂಷಿಕ ವಾಹನ
ಮೋದವ ತರುವನು ಅನುದಿನ
ಚೌತಿಯ ಗಣಪನ ನೆನೆದ ತಕ್ಷಣ
ಧನ್ಯವಾಗುವುದು ಜೀವನ
ಗೌರಿಯ ಜೊತೆಯಲಿ ಬರುವ ಗಣಪತಿ
ತಾಯಿಯ ಮೇಲೆ ಇವನಿಗೆ ಪ್ರೀತಿ
ನೀಡುವ ಜನರಿಗೆ ನಿರ್ಮಲ ಭಕ್ತಿ
ಇವನೆ ತರುವನು ಶಾಶ್ವತ ಕೀರ್ತಿ
ಪಾರ್ವತಿ ತಪಸಿನ ಪುಣ್ಯಫಲ
ಗಣಪತಿ ಎಂಬ ಮಹಾಬಲ
***********************************************************