ಪಾಹಿಶಿವೆ ಪಾಹಿಶಿವೆ

ಪಾಹಿಶಿವೆ ಪಾಹಿಶಿವೆ ಪರಮ ಕಲ್ಯಾಣಿ 
ಪಾಲಿಸೆಮ್ಮ ಪಾಪನೀಗಿ ಮಹಿಷ ಮರ್ಧಿನಿ

ನಿನ್ನ ಕರುಣೆ ಭಿಕ್ಷೆಯಿದು ಶಿವನ ಬೇಡಿಕೆ
ಅನುಪಮಾನ ನರರ ನೀನು ಕಾಯೆ ಅಂಬಿಕೆ
ಮಾತೆ ಚರಣ ಕಮಲದಲ್ಲಿ ಇರಿಸಿ ನಂಬಿಕೆ
ಮನುಜ ಕುಲವ ಕಾಯೆ ಒಡನೆ ನೀಡು ಕೋರಿಕೆ

ಪಾಹಿಶಿವೆ ಪಾಹಿಶಿವೆ ಪರಮ ಕಲ್ಯಾಣಿ
ಪಾಲಿಸೆಮ್ಮ ಪಾಪನೀಗಿ ಮಹಿಷ ಮರ್ಧಿನಿ

ರೌದ್ರರೂಪ ತಾಳಿದಂಥ ಸಿಂಹವಾಹಿನಿ
ಚಂಡ ಮಂಡ ರಕ್ತಬೀಜ ಧನುಜ ಧ್ವಂಸಿನಿ
ಮುರಹಧಾರೆ ಇಳೆಯಧಾತೆ ಮಾರ್ಗದರ್ಶಿನಿ
ಶರಣು ಬಂದ ಜನಕೆ ನೀನು ಭಾಗ್ಯದಾಯಿನಿ

ಪಾಹಿಶಿವೆ ಪಾಹಿಶಿವೆ ಪರಮ ಕಲ್ಯಾಣಿ
ಪಾಲಿಸೆಮ್ಮ ಪಾಪನೀಗಿ ಮಹಿಷ ಮರ್ಧಿನಿ