ಪಾಲಿಸು ಪಾಲಿಸು ಪಾರ್ವತಿ ತನಯ

ಪಾಲಿಸು ಪಾಲಿಸು ಪಾರ್ವತಿ ತನಯ 
ಲಾಲಿಸು ವಿಘ್ನವಿನಾಶಕ ಸದಯ

ಮಧುಪುರವಾಸ ವಿಜಯವಿಲಾಸ
ನಮಿಸುವೆ ಲಂಬೋಧರ ಭಯನಾಶ

ಓಂಕಾರಪ್ರಿಯ ಗಣಪ ನಿರಂಜನ
ಪನ್ನಗಭೂಷಣ ಸೌಮ್ಯ ಪ್ರಸನ್ನ

ಸಿದ್ದಿವಿನಾಯಕ ಸಕಲಾಭ್ಯುದಯ
ಪಾಶಾಂಕುಶಧರ ವರಗಜವದನಾ
************************************************