ಪಂಢರಾಪುರವೆಂಬ
ಪಂಢರಾಪುರವೆಂಬ ದೊಡ್ಡ ನಗರ ಅಲ್ಲಿ ವಿಠೋಬನೆಂಬ ಸಾಹುಕಾರ
ವಿಠೋಬನಿರುವದು ನದಿತೀರ ಅಲ್ಲಿ ಪಂಢರಿಭಜನೆ ವ್ಯಾಪಾರ
ತಂದೆ ನೀನೆ ತಾಯಿ ನೀನೆ ಪಾಂಡುರಂಗ ನಮ್ಮ ಬಂಧು ನೀನೆ ಬಳಗ ನೀನೆ ಪಾಂಡುರಂಗ
ಭಕ್ತರ ಪೋಷಕ ಪಾಂಡುರಂಗ ನಮ್ಮ ಮುಕ್ತಿದಾಯಕ ಪಾಂಡುರಂಗ
ಪಂಢರಾಪುರವೆಂಬ ದೊಡ್ಡ ನಗರ ಅಲ್ಲಿ ವಿಠೋಬನೆಂಬ ಸಾಹುಕಾರ
ವಿಠೋಬನಿಗೆ ಪ್ರಿಯ ತುಳಸಿಹಾರ ಅಲ್ಲಿ ಭಕ್ತ ಜನರ ವ್ಯಾಪಾರ
ವಿಠೋಬನಿಗೆ ಪ್ರಿಯ ಬುಕ್ಕಿಯ ಗಂಧ ಅಲ್ಲಿ ಚಂದ್ರಭಾಗಾ ಸ್ನಾನ ಬಲು ಅಂದ
ಪಂಢರಾಪುರವೆಂಬ ದೊಡ್ಡ ನಗರ ಅಲ್ಲಿ ವಿಠೋಬನೆಂಬ ಸಾಹುಕಾರ
ಶ್ರೀಹರಿ ವಿಠ್ಠಲ ಪಾಂಡುರಂಗ ಜಯ ಹರಿ ವಿಠ್ಠಲ ಪಾಂಡುರಂಗ
ವಿಠ್ಠಲ ವಿಠ್ಠಲ ಪಾಂಡುರಂಗ ನಮ್ಮ ಪುರಂದರ ವಿಠ್ಠಲ ಪಾಂಡುರಂಗ
ಪಂಢರಾಪುರವೆಂಬ ದೊಡ್ಡ ನಗರ ಅಲ್ಲಿ ವಿಠೋಬನೆಂಬ ಸಾಹುಕಾರ
*******************************************************************