ಪೋಪು ಹೋಗೋಣ ಬಾರೋ ರಂಗ

ಪೋಪು ಹೋಗೋಣ ಬಾರೋ ರಂಗ 
ಕೂಡಿ ಯಮುನೆ ತೀರದಲ್ಲಿ
ಪೋಪು ಹೋಗೋಣ ಬಾರೋ ರಂಗ
ಕೂಡಿ ಯಮುನೆ ತೀರದಲ್ಲಿ

ಜಾಹ್ನವಿಯ ತೀರವಂತೆ ಜನಕರಾಯನ ಕುವರಿಯಂತೆ
ಜಾನಕಿಯ ವಿವಾಹವಂತೆ ಜಾಣ ನೀ ಬರಬೇಕಂತೆ

ಪೋಪು ಹೋಗೋಣ ಬಾರೋ ರಂಗ
ಕೂಡಿ ಯಮುನೆ ತೀರದಲ್ಲಿ

ಕುಂಡಲಿಯ ನಗರವಂತೆ ಭೀಷ್ಮರಾಯನ ಕುವರಿಯಂತೆ
ಶಿಶುಪಾಲನ ಒಲ್ಲಳಂತೆ ನಿನಗೆ ಓಲೆ ಬರೆದಳಂತೆ

ಪೋಪು ಹೋಗೋಣ ಬಾರೋ ರಂಗ
ಕೂಡಿ ಯಮುನೆ ತೀರದಲ್ಲಿ

ಪಾಂಡವರು ಕೌರರಿಗೆ ಲೆತ್ತವಾಡಿ ಸೋತರಂತೆ
ರಾಜ್ಯವನ್ನು ಬಿಡಬೇಕಂತೆ ರಂಗ ವಿಠಲ ಬರಬೇಕಂತೆ

ಪೋಪು ಹೋಗೋಣ ಬಾರೋ ರಂಗ
ಕೂಡಿ ಯಮುನೆ ತೀರದಲ್ಲಿ
ಕೂಡಿ ಯಮುನೆ ತೀರದಲ್ಲಿ


*******************************************************************