ರಾಮ ರಾಮ ಎಂಬೆರಡಕ್ಷರ
ರಾಮ ರಾಮ ಎಂಬೆರಡಕ್ಷರ
ಪ್ರೇಮದಿ ಸಲಹಿತು ಸುಜನರನು
ಹಾಲಾಹಲವನು ಪಾನವ ಮಾಡಿದ
ಫಾಲಲೋಚನನೆ ಬಲ್ಲವನು
ಆಲಾಪಿಸುತ ಶಿಲೆಯಾಗಿದ್ದ
ಬಾಲೆ ಅಹಲ್ಯೆಯ ಕೇಳೇನು
ಅಂಜಿಕೆ ಇಲ್ಲದೆ ಗಿರಿ ಸಾರಿದ ಕಪಿ
ಕುಂಜರ ರವಿಸುತ ಬಲ್ಲವನು
ಎಂಜಲ ಫಲಗಳ ಹರಿಗರ್ಪಿಸಿದ
ಕಂಜಲೋಚನೆಯ ಕೇಳೇನು
ಕಾಲವನರಿತು ಸೇವೆಯ ಮಾಡಿದ
ಲೋಲ ಲಕ್ಷ್ಮಣನೆ ಬಲ್ಲವನು
ವ್ಯಾಳ ಶಯನ ಶ್ರೀ ವಿಜಯವಿಠಲನ
ಲೀಲೆ ಶರಧಿಯ ಕೇಳೇನು
**************************************************