ರಾಮಕೃಷ್ಣ ಹರಿ ಮುಕುಂದ ಮುರಾರಿ
ರಾಮಕೃಷ್ಣ ಹರಿ ಮುಕುಂದ ಮುರಾರಿ
ಪಾಂಡುರಂಗ ಪಾಂಡುರಂಗ ಪಾಂಡುರಂಗ ಶ್ರೀಹರಿ
ಮಕರಕುಂಡಲ ಧಾರಿ ಭಕ್ತಬಂಧು ಶೌರಿ
ಶಕ್ತಿದಾತ ಮುಕ್ತಿದಾತ ವಿಟ್ಟಲ ನರಹರಿ
ದೀನಬಂಧು ಕೃಪಾಸಿಂಧು ಶ್ರೀಹರಿ ಶ್ರೀಹರಿ
ಪಾಪನಾಶ ಹೇ ಕೃಪಾಂಗ ವಾಸುದೇವ ಶ್ರೀಹರಿ
ತುಳಸಿಹಾರ ಕಂದರ ಭಕ್ತ ಹೃದಯ ಮಂದಿರ
ಮಂದಾರಾದ್ರಿ ದರದೇವ ಇಂದಿರೇಶ ಶ್ರೀಹರಿ
ಪುಂಡರೀಕ ವರದ ಪಂಡರೀನಾಥ ಶುಭದಾ
ಅಂಡಜ ವಾಹನ ಕೃಷ್ಣ ಪಾಂಡುರಂಗ ದೇವಾ
ನಾಮದೇವ ಸಂತತ ಜ್ಞಾನದೇವ ದೀಪಿಕಾ
ತುಕಾರಾಮ ಪೂಜಿತ ದಾಸಕೇಶವ ಸನ್ನುತ
ರಾಮಕೃಷ್ಣ ಹರಿ ಮುಕುಂದ ಮುರಾರಿ
ಪಾಂಡುರಂಗ ಪಾಂಡುರಂಗ ಪಾಂಡುರಂಗ ಶ್ರೀಹರಿ
************************************************************************