ರಂಗ ಬಾರೋ
ರಂಗ ಬಾರೋ ಪಾಂಡು ರಂಗ ಬಾರೋ
ಶ್ರೀರಂಗ ಬಾರೋ ನರಸಿಂಗ ಬಾರೋ
ಕಂದ ಬಾರೋ ಎನ್ನ ತಂದೆ ಬಾರೋ
ಇಂದಿರಾರಮಣ ಮುಕುಂದ ಬಾರೋ
ರಂಗ ಬಾರೋ ಪಾಂಡು ರಂಗ ಬಾರೋ
ಶ್ರೀರಂಗ ಬಾರೋ ನರಸಿಂಗ ಬಾರೋ
ಅಪ್ಪ ಬಾರೋ ತಿಮ್ಮಪ್ಪ ಬಾರೋ
ಕಂದರ್ಪನಯ್ಯನೆ ಕಂಚಿ ವರದ ಬಾರೋ
ಅಣ್ಣ ಬಾರೋ ಎನ್ನ ಚಿನ್ನ ಬಾರೋ
ಪುಣ್ಯಮೂರ್ತಿ ಮಹಿಷಪುರಿಯ ಚೆನ್ನ ಬಾರೋ
ರಂಗ ಬಾರೋ ಪಾಂಡು ರಂಗ ಬಾರೋ
ಶ್ರೀರಂಗ ಬಾರೋ ನರಸಿಂಗ ಬಾರೋ
ವಿಷ್ಣು ಬಾರೋ ಉಡುಪಿ ಕೃಷ್ಣ ಬಾರೋ
ಎನ್ನಿಷ್ಟಮೂರ್ತಿ ಪುರಂದರ ವಿಠಲ ಬಾರೋ
ರಂಗ ಬಾರೋ ಪಾಂಡು ರಂಗ ಬಾರೋ
ಶ್ರೀರಂಗ ಬಾರೋ ನರಸಿಂಗ ಬಾರೋ
*************************************************************