ಸಾವಿತ್ರಿ ಗಾಯಿತ್ರಿ
ಸಾವಿತ್ರಿ ಗಾಯಿತ್ರಿ ಸರಸ್ವತಿ ಎಂದರೆ ಎಲ್ಲವೂ ನೀನಮ್ಮ
ಬ್ರಾಹ್ಮಿ ವೈಷ್ಣವಿ ರೌದ್ರಿ ಎಂದರೆ ಮೂವರು ನೀನಮ್ಮ
ಇಚ್ಛಾಶಕ್ತಿ ಕ್ರಿಯಾಶಕ್ತಿ ಜೊತೆಗೆ ಜ್ಞಾನಶಕ್ತಿ
ಮೂರನು ನೀಡುವ ಶಕ್ತಿ ಸ್ವರೂಪಿಣಿ ನೀನೇ ಪರಾಶಕ್ತಿ
ಸಾವಿತ್ರಿ ಗಾಯಿತ್ರಿ ಸರಸ್ವತಿ ಎಂದರೆ ಎಲ್ಲವೂ ನೀನಮ್ಮ
ಬ್ರಾಹ್ಮಿ ವೈಷ್ಣವಿ ರೌದ್ರಿ ಎಂದರೆ ಮೂವರು ನೀನಮ್ಮ
ಋಗ್ವೇದದಲ್ಲೂ ಸಾಮವೇದದಿ ಯಜುರ್ವೇದದಲ್ಲೂ
ವಿರಾಜಿತಳು ನೀನೇ ತಾಯೆ ವೇದರೂಪಿಣಿಯೇ
ಸಾವಿತ್ರಿ ಗಾಯಿತ್ರಿ ಸರಸ್ವತಿ ಎಂದರೆ ಎಲ್ಲವೂ ನೀನಮ್ಮ
ಬ್ರಾಹ್ಮಿ ವೈಷ್ಣವಿ ರೌದ್ರಿ ಎಂದರೆ ಮೂವರು ನೀನಮ್ಮ
ಹಂಸಗಮನೆ ಗರುಡಾರೂಢಳು ವೃಷಭವಾಹಿನಿಯು
ನೀನೇ ಗಂಗೆ ನೀನೇ ಯಮುನೆ ನೀನೇ ಸರಸ್ವತಿಯು
ಸಾವಿತ್ರಿ ಗಾಯಿತ್ರಿ ಸರಸ್ವತಿ ಎಂದರೆ ಎಲ್ಲವೂ ನೀನಮ್ಮ
ಬ್ರಾಹ್ಮಿ ವೈಷ್ಣವಿ ರೌದ್ರಿ ಎಂದರೆ ಮೂವರು ನೀನಮ್ಮ
ಕುಂಡಲೀಶಕ್ತಿ ವ್ಯಾಪಿನಿ ನೀನೇ ಹೃದಯದ ಪ್ರಾಣವಾಹಿನಿ ನೀನೇ
ಪಾಪ ಕೋಟಿಯ ಕಳೆವಳು ನೀನೇ ಯಜ್ಞ ಯಾಗ ಫಲ ತರುವಳು ನೀನೇ
ಸಾವಿತ್ರಿ ಗಾಯಿತ್ರಿ ಸರಸ್ವತಿ ಎಂದರೆ ಎಲ್ಲವೂ ನೀನಮ್ಮ
ಬ್ರಾಹ್ಮಿ ವೈಷ್ಣವಿ ರೌದ್ರಿ ಎಂದರೆ ಮೂವರು ನೀನಮ್ಮ
*********************************************************************