ಶರಣು ಶರಣು ಬಂದೆವು

ಶರಣು ಶರಣು ಬಂದೆವು ಹೇ ಬೆನಕ
ಕೈಯ‌ ಹಿಡಿದು ಕಾಯೋ ಕಡೆತನಕ

ಮೂಷಿಕ ವಾಹನ ಮೋದಕ ಪ್ರಿಯವರ ಗೌರಿ ತನಯಾ
ನಿನ್ನ ನೆನೆಯಲು ಗೈಯುವ ಕಾರ್ಯಕೆ ಭಯ ಒಂದಿರದಯ್ಯಾ
ಪೂಜೆಗೆ ಪ್ರಥಮ ಸ್ಥಾನವು ನಿನಗೆ ವಂದಿಪೆ ಗಣರಾಯ

ಶರಣು ಶರಣು ಬಂದೆವು ಹೇ ಬೆನಕ
ಕೈಯ‌ ಹಿಡಿದು ಕಾಯೋ ಕಡೆತನಕ

ಲಂಭೋಧರನೆ ಏಕದಂತನೆ ಚಂದ್ರನ ಗರ್ವ ಮುರಿದವನೆ
ರಾವಣ ತಂದ ಪರಶಿವನಾತ್ಮಲಿಂಗದಕ್ಕಲು ಬಿಡದವನೆ
ವಿದ್ಯಾ ಬುಧ್ಧಿಗೆ ಕತ್ರುವು ನೀನೆ ಹೇ ವಿಘ್ನೇಶ್ವರನೆ

ಶರಣು ಶರಣು ಬಂದೆವು ಹೇ ಬೆನಕ
ಕೈಯ‌ ಹಿಡಿದು ಕಾಯೋ ಕಡೆತನಕ

ಪರಮ ಪೂಜ್ಯನೆ ಪಾಹಿ ಎಂದವರ ಪಾಲನೆ ಭಾರ ಹೊತ್ತವನೆ
ನಿನ್ನ ಚರಣದಲಿ ತಲೆಯನಿಟ್ಟಿಹೆವು ನಮ್ಮನು ಕಾವುದು ನಿಮ್ಮ ಹೊಣ್ಣೆ
ವಿದ್ಯೆಗೆ ಎಂದು ಮರೆವಿರದಂತೆ ಸಲಹೋ ಗಜಮುಖನೆ

ಶರಣು ಶರಣು ಬಂದೆವು ಹೇ ಬೆನಕ
ಕೈಯ‌ ಹಿಡಿದು ಕಾಯೋ ಕಡೆತನಕ

***************************************************************