ಶರಣು ಶರಣು ಜಯ ದುರ್ಗೆ

ಶರಣು ಶರಣು ಜಯ ದುರ್ಗೆ ಸರ್ವ ಶಕ್ತಿ ಜಗನ್ಮಾತೆ
ಶರಣು ಶರಣು ಶಿವೆ ಗೌರಿ ರಕ್ಷಿಸೆಮ್ಮ ಸುಖದಾತೆ

ಮಂಗಳವಾರ ಸುಮಂಗಲಿಯರು ನಿನ್ನಯ ನಾಮವ ಭಜಿಸುವರು
ಒಂಭತ್ತು ವಾರ ವೃತವಿರಲು ದೊರಕುವುದು ಇಷ್ಟಾರ್ಥಗಳು

ರಕ್ಷಿಸುವವಳು ನೀನೇ ಶಿಕ್ಷಿಸುವವಳು ನೀನೇ
ಅಣು ಅಣುವೆಲ್ಲಾ ತುಂಬಿಹೆ ನೀನೇ ಕೋರಿಕೆ ಕರುಣಿಸು ಕಾಮಧೇನು

ಜಯ ಶಿವೆ ಶಂಕರಿ ಜಯ ಅಭಯಂಕರಿ ಜಯ ಜಯ ಶಕ್ತಿ ಜಯ ಪ್ರಳಯಂಕರಿ
ಜಯ ಶಿವೆ ಶಾಂಭವಿ ಜಯ ನಟ ಭೈರವಿ ಜಯ ಕಾದಂಬರಿ ಜಯ ಶ್ವೇತಾಂಬರಿ

ಜಯ ಮಾತಾಂಗಿನಿ ಆನಂದದಾಯಿನಿ ಜಯ ಜಗದಂಬೆ ಪುಣ್ಯ ಸ್ವರೂಪಿಣಿ
ಓಂ ಜಗಜನನಿ ಮಾತಾಭವಾನಿ ಓಂಕಾರೇಶ್ವರಿ ಚಿತ್ತ ನಿವಾಸಿನಿ


*************************************************************************