ಶರವು ಮಹಾ ಗಣಪತಿ
ಶರವು ಮಹಾ ಗಣಪತಿ ನಮಗೆ ನಿನ್ನದೇ ಸ್ತುತಿ
ಅನುದಿನವು ಭಕ್ತರು ನಿನ್ನ ನಂಬಿ ಇರುವರು
ಗಜಮುಖದ ದೇವನೆ ನಿನಗೆ ವಂದನೆ
ಭಕ್ತಿಯ ಸೇವೆಯಲಿ ಆರಾಧನೆ
ಕಷ್ಟ ಪರಿಹಾರಕೆ ಮಾರ್ಗದರ್ಶಕ
ಕಾಪಾಡು ಕರುಣಾಳು ವಿಘ್ನನಾಶಕ
ಶರವು ಮಹಾ ಗಣಪತಿ ನಮಗೆ ನಿನ್ನದೇ ಸ್ತುತಿ
ಅನುದಿನವು ಭಕ್ತರು ನಿನ್ನ ನಂಬಿ ಇರುವರು
ಶರವು ಶಿವಾಲಯದ ತೆಂಕು ದಿಕ್ಕಿನಲ್ಲಿ
ದಿವ್ಯ ಮಹಾ ಗಣೇಶ ಅವತರಿಸಿದನಿಲ್ಲಿ
ನಿತ್ಯವೂ ಎಡೆಬಿಡದೆ ನಾವು ವಂದಿಸೆ
ಸಕಲ ಇಷ್ಟಾರ್ಥವ ಪರಿ ಪಾಲಿಸೋ
ಶರವು ಮಹಾ ಗಣಪತಿ ನಮಗೆ ನಿನ್ನದೇ ಸ್ತುತಿ
ಅನುದಿನವು ಭಕ್ತರು ನಿನ್ನ ನಂಬಿ ಇರುವರು
ಪುಣ್ಯ ಪ್ರಸಾದವೇ ಪಂಚಕಜ್ಜಾಯ
ಮುಕ್ತಿಯನ್ನು ನೀಡುವ ಭಕ್ತ ಜನಪ್ರಿಯ
ಸತ್ಯ ಧರ್ಮದಿ ತೋರೋ ನಿನ್ನ ಮಾಯೆಯ
ಶಾಸ್ತ್ರ ಸಂಪೂಜಿತ ಸಿದ್ಧಿ ವಿನಾಯಕ
ಶರವು ಮಹಾ ಗಣಪತಿ ನಮಗೆ ನಿನ್ನದೇ ಸ್ತುತಿ
ಅನುದಿನವು ಭಕ್ತರು ನಿನ್ನ ನಂಬಿ ಇರುವರು
*********************************************************************