ಶ್ರೀ ರಾಘವೇಂದ್ರ ಪ್ರತಿ ದಿನಂಗಳಲಿ
ಶ್ರೀ ರಾಘವೇಂದ್ರ ಪ್ರತಿ ದಿನಂಗಳಲಿ
ನಿಮ್ಮ ಚಾರು ಚರಣಗಳಿಗೆ ಎರಗುವೆ
ಎರಗುವೆನು ಸದ್ಭಕ್ತಿ ವೈರಾಗ್ಯ ಕೊಟ್ಟು
ಸಲಹು ನೀ ರಾಘವೇಂದ್ರ
ರಾಯ ರಾಘವೇಂದ್ರ
ಹೇಯ ಸಂಸಾರದೊಳು
ಕಾಯಬೇಕೆನ್ನ ಕರುಣದಿ
ಕರುಣದಿಂ ಕಾಯದಿರೆ
ನ್ಯಾಯವೆ ಗುರುರಾಯ
ಶ್ರೀ ಸುಧೀಂದ್ರಕುಮಾರ
ಏಸು ಮಾತುಗಳ್ಯಾಕೆ
ದಾಸನ ಭಾವಿಸೋದು ಮೋಹಿಸೋದು
ಇಹಪರದಿ
ಪೂರೈಸೆನ್ನ ಅಭಿಲಾಷೆಗಳ
ಜಗನ್ನಾಥ ವಿಠಲಾ.
******************************************************