ಶ್ರೀ ವಿಘ್ನೇಶ್ವರ ವಿನಾಯಕ

ಶ್ರೀ ವಿಘ್ನೇಶ್ವರ ವಿನಾಯಕ 
ವರಪ್ರಸಾದಿಸೋ ಗಜಾನನ

ಸುಮುಖನೆ ಹೇರಂಭ ಏಕದಂತನೆ
ಸುರಮುನಿ ವಂದಿತನೆ ಗಜಕರ್ಣನೇ

ಧೂಮ್ರಕೇತುಗಳ ನಾಯಕ ಗಜಮುಖ
ಲೋಕಪಾಲಕ ತಂದೇ ಗಣಪತಿ

ಭಾದ್ರಪದ ಶುಕ್ಲ ಚೌತಿ ನಿನ್ನ ಪೂಜಿಸೇ
ಭಕ್ತಗೆ ನೀಡುವೆ ನೀ ಸರ್ವಮಂಗಳ

ಭಾಗ್ಯದಾತ ಜಗವಂದಿತ ಗಣಪತಿ
ಬಾಳ ಬೆಳಗಿ ನೀಡು ಬಾರೋ ಸನ್ಮತಿ


*******************************************************