ಶೃಂಗಾರವಾಗಿಹಳು

ಶೃಂಗಾರವಾಗಿಹಳು ಶ್ರೀ ಮಹಾಲಕ್ಷ್ಮೀ 
ಬಂಗಾರ ಮಂಟಪದಿ ಬಂದು ಕುಳಿತಿಹಳು

ತಾವರೆಯ ಕಮಲದಲಿ ತಾ ನೆಲೆಸಿಹಳು ಲಕ್ಷ್ಮೀ
ಬಾನುಕೋಟಿ ಪ್ರಭೆಯಂತೆ ಹೊಳೆಯುತಿಹಳು ಲಕ್ಷ್ಮೀ
ಬಿಳಿಯ ಸೀರೆಯನುಟ್ಟು ಜರಿಯ ಕುಪ್ಪಸ ತೊಟ್ಟು
ನಡೆಮುಡಿಯ ಮೇಲೆ ತಾ ಬರುತಿಹಳು ಲಕ್ಷ್ಮೀ

ಶೃಂಗಾರವಾಗಿಹಳು ಶ್ರೀ ಮಹಾಲಕ್ಷ್ಮೀ
ಬಂಗಾರ ಮಂಟಪದಿ ಬಂದು ಕುಳಿತಿಹಳು

ಎಡಬಲದಿ ಗಜಲಕ್ಷ್ಮೀ ನಡುವೆ ತಾವರೆಲಕ್ಷ್ಮೀ
ಫಳಫಳನೆ ಹೊಳೆಯುವಳು ಶ್ರೀ ಮಹಾಲಕ್ಷ್ಮೀ
ಬಡವರಾ ಮನೆಯನ್ನು ಬಿಡದೇ ಕಾಯುವ ಲಕ್ಷ್ಮೀ
ಸಡಗರದಿ ಬರುತಿಹಳು ಶ್ರೀ ಮಹಾಲಕ್ಷ್ಮೀ

ಶೃಂಗಾರವಾಗಿಹಳು ಶ್ರೀ ಮಹಾಲಕ್ಷ್ಮೀ
ಬಂಗಾರ ಮಂಟಪದಿ ಬಂದು ಕುಳಿತಿಹಳು

ನರಸಿಂಹ ವಿಠಲನ ಅರಸಿ ನೀ ಸ್ವೀಕರಿಸು
ಸರಸವಾಡುತ ಎನ್ನ ಸಲಹು ಮಾತೆ
ಮಾಡಿದಪರಾದವನು ಮನದಿ ಎಣಿಸದೆ ನೀನು
ಕಾಪಾಡಬೇಕೆಂದು ಶಿರವ ಬಾಗುವೆನು

ಶೃಂಗಾರವಾಗಿಹಳು ಶ್ರೀ ಮಹಾಲಕ್ಷ್ಮೀ
ಬಂಗಾರ ಮಂಟಪದಿ ಬಂದು ಕುಳಿತಿಹಳು


*****************************************************************************