ಉಡುಪಿಯ ಕಂಡೀರಾ

ಉಡುಪಿಯ ಕಂಡೀರಾ ಉಡುಪಿಯ ಕೃಷ್ಣನ ಕಂಡೀರಾ
ಕೃಷ್ಣನ ಕಂಡೀರಾ ಕೃಷ್ಣನ ಉಡುಪಿಯ ಕಂಡೀರಾ

ಜಗದೊಡೆಯ ಬಂದ ಉಡುಪಿಯಲಿ ನಿಂದ ಪಡುಗಡಲ ತಾರೆಯಿಂದ
ಮಿಗಿಲುಂಟೆ ಚೆಂದ ಕಣ್ಗಳಾನಂದ ಆನಂದಕಂದನಿಂದ
ದ್ವಾರಕೆಯ ವಾಸ ಓ ಹೃಷೀಕೇಶ ಸಾಕೆನಿಸಿತೇನೋ ಈಶಾ
ವಾರಿಯಲಿ ಬಂದೆ ದಾರಿಯಲಿ ನಿಂದೆ ನೀ ದಾಟಿ ದೇಶ ದೇಶ

ಉಡುಪಿಯ ಕಂಡೀರಾ ಉಡುಪಿಯ ಕೃಷ್ಣನ ಕಂಡೀರಾ

ಕಡಕೋಲು ಕೈಯ ಕಡುನೀಲಿ ಮೈಯ ಈ ಬಾಲ ರೂಪ ಕಂಡು
ಕೊಡಮಡದ ಶಿರವೋ ಜೋಡಿಸದ ಕರವೋ ಬರಿ ಹುಲ್ಲು ಮಣ್ಣು ದುಂದು
ಆ ಮುಗುಳುನಗೆಗೆ ಆ ನಿಂತ ಬಗೆಗೆ ಮರುಳಾದಳಂತೆ ಗೋಪಿ
ಶ್ರೀಮಧ್ವಗೊಲಿದ ಕೃಷ್ಣನನೆಗೆಲಿದ ವೆಗ್ಗಳದ ನಾಡು ಉಡುಪಿ

ಉಡುಪಿಯ ಕಂಡೀರಾ ಉಡುಪಿಯ ಕೃಷ್ಣನ ಕಂಡೀರಾ

ಪಡುಗಡಲ ತೀರದಿಂದೆದ್ದು ಬಾರ ಕಡಗೋಲು ಹಗ್ಗ ಹಿಡಿದು
ಬಿಡುಗಡೆಯ ದಾರಿ ಭಕ್ತರಿಗೆ ತೋರಿ ನಮ್ಮೆದೆಯ ಬೆಣ್ಣೆ ಕಡೆದು
ಆನಂದತೀರ್ಥರೀಕರೆಗೆ ಪಾರ್ಥಸಾರಥಿಯು ಕರಗಿ ಬಂದು
ತಾ ನಿಂತ ಕಲ್ಲಿನೊಳಗಿಂದ ಇಲ್ಲಿ ವೈಕುಂಠವನ್ನೇ ತಂದು


ಉಡುಪಿಯ ಕಂಡೀರಾ ಉಡುಪಿಯ ಕೃಷ್ಣನ ಕಂಡೀರಾ
ಕೃಷ್ಣನ ಕಂಡೀರಾ ಕೃಷ್ಣನ ಉಡುಪಿಯ ಕಂಡೀರಾ


***************************************************************************