ವಂದನಂ ಗುರು ವೀರನೆ

ವಂದನಂ ಗುರು ವೀರನೆ ನಿಮಗೊಂದನಂ ಸುಖ ಸಾರನೆ 
ಬಂಧಮೋಕ್ಷಗಳೆಂಬ ಎರಡರ ಸಂದು ತೋರಿದ ಧೀರನೆ

ತನ್ನ ನಿಜವನು ನೋಡನು ಈ ಭಿನ್ನವಳಿಯದ ಮೂಢನು
ನಿನ್ನ ಪಾದವ ಕಂಡ ಮನುಜನು ಜನ್ಮವಳಿದಾರೂಢನು

ವಂದನಂ ಗುರು ವೀರನೆ ನಿಮಗೊಂದನಂ ಸುಖ ಸಾರನೆ
ಬಂಧಮೋಕ್ಷಗಳೆಂಬ ಎರಡರ ಸಂದು ತೋರಿದ ಧೀರನೆ

ಹಿಂದೆ ಸುಕೃತವ ಮಾಡಿದೆ ಅದರಿಂದ ನಿನ್ನೊಳು ಕೂಡಿದೆ
ಬಂಧವಿಲ್ಲದ ಪೂರ್ಣಸಹಜಾನಂದ ಪದವಿಯ ನೀಡಿದೆ

ವಂದನಂ ಗುರು ವೀರನೆ ನಿಮಗೊಂದನಂ ಸುಖ ಸಾರನೆ
ಬಂಧಮೋಕ್ಷಗಳೆಂಬ ಎರಡರ ಸಂದು ತೋರಿದ ಧೀರನೆ

ತಂದೆತಾಯಿಗಳಾದರೋ ಬಹುಮಂದಿ ಕಳೆದೇ ಹೋದರು
ತಂದೆ ಸದ್ಗುರು ಶಂಕರಾರ್ಯನೇ ಹಿಂದೆ ನಿಲ್ಲುವ ದೇವರು

ವಂದನಂ ಗುರು ವೀರನೆ ನಿಮಗೊಂದನಂ ಸುಖ ಸಾರನೆ
ಬಂಧಮೋಕ್ಷಗಳೆಂಬ ಎರಡರ ಸಂದು ತೋರಿದ ಧೀರನೆ


**********************************************************