ವಂದಿಪೆ ನಿನಗೆ ಗಣನಾಥಾ
ಮೊದಲೊಂದಿಪೆ ನಿನಗೆ ಗಣನಾಥಾ
ದೇವಾ ವಂದಿಪೆ ನಿನಗೆ ಗಣನಾಥಾ
ಬಂದ ವಿಘ್ನಗಳ ಕಳೆ ಗಣನಾಥಾ
ಬಂದ ವಿಘ್ನಗಳ ಕಳೆ ಗಣನಾಥಾ
ದೇವಾ ವಂದಿಪೆ ನಿನಗೆ ಗಣನಾಥಾ
ಆದಿಯಲ್ಲಿ ನಿನ್ನ ಪಾದ ಪೂಜಿಸಿದ ಧರ್ಮರಾಯ
ಸಾಧಿಸಿದ ರಾಜ್ಯವ ಗಣನಾಥಾ
ಸಾಧಿಸಿದ ರಾಜ್ಯವ ಗಣನಾಥಾ
ದೇವಾ ವಂದಿಪೆ ನಿನಗೆ ಗಣನಾಥಾ
ಅಂದು ರಾವಣನು ಮದದಿಂದ ನಿನ್ನ ಪೂಜಿಸದೆ
ಸಂದ ರಣದಲಿ ದೇವಾ ಗಣನಾಥಾ
ಸಂದ ರಣದಲಿ ಗಣನಾಥಾ
ದೇವಾ ವಂದಿಪೆ ನಿನಗೆ ಗಣನಾಥಾ
ಮಂಗಳ ಮೂರುತಿ ಗುರು ರಂಗ ವಿಠಲನ ಪಾದ
ಹಿಂಗದೆ ಭಜಿಪೆ ದೇವಾ ಗಣನಾಥಾ
ಹಿಂಗದೆ ಭಜಿಪೆ ಗಣನಾಥಾ
ದೇವಾ ವಂದಿಪೆ ನಿನಗೆ ಗಣನಾಥಾ
ಮೊದಲೊಂದಿಪೆ ನಿನಗೆ ಗಣನಾಥಾ
ದೇವಾ ವಂದಿಪೆ ನಿನಗೆ ಗಣನಾಥಾ
********************************************************************