ಯೋಗಿ ಮನೆಗೆ ಬಂದ
ಯೋಗಿ ಮನೆಗೆ ಬಂದ ಶ್ರೀ ಗುರುದೇವ ಮನೆಗೆ ಬಂದ
ಕಾಲಲಿ ಪಾದುಕೆ ಕೈಯಲಿ ದಂಡ ಬಾಲರವಿಯ ಕಳೆಯ ಆ....ಆ...ಆ...
ಯೋಗಿ ಮನೆಗೆ ಬಂದ ಶ್ರೀ ಗುರುದೇವ ಮನೆಗೆ ಬಂದ
ಮಸ್ತಕದಲಿ ಜಟೆ ಶೋಭಿಸುತಲ್ಲಿ
ಕಸ್ತೂರಿ ತಿಲಕ ಚಂದನ ಹಣೆಯಲ್ಲಿ ವಿಸ್ತರ ನಗುಮುಖದ ಆ....ಆ...ಆ...
ಯೋಗಿ ಮನೆಗೆ ಬಂದ ಶ್ರೀ ಗುರುದೇವ ಮನೆಗೆ ಬಂದ
ಜೋಲುತಿರಲು ಕೊರಳೊಳು ರುದ್ರಾಕ್ಷ
ಜೋಳಿಗೆ ಬಗಲಲಿ ತ್ರಿಲೋಕ ರಕ್ಷ ಕಾಷಾಯಾಂಬರದ ಆ....ಆ...ಆ...
ಯೋಗಿ ಮನೆಗೆ ಬಂದ ಶ್ರೀ ಗುರುದೇವ ಮನೆಗೆ ಬಂದ
ಕುರುದ್ವೀಪದಿ ಕೃಷ್ಣೆಯ ತಟದಲ್ಲಿ
ಸರಸದಿ ವಾಸಿಪ ಶ್ರೀಪಾದಯೋಗಿ ಪರಮಪುರುಷ ನೃಹರಿ ಈ....ಈ...ಈ...
ಯೋಗಿ ಮನೆಗೆ ಬಂದ ಶ್ರೀ ಗುರುದೇವ ಮನೆಗೆ ಬಂದ
ಭಕ್ತಕಾಮ ಕಲ್ಪದ್ರುಮನೀತ
ನಿತ್ಯಪೂರ್ಣ ಸಚ್ಚಿದಾತ್ಮ ದತ್ತ ಶಂಕರ ಗುರುರೂಪ ಆ....ಆ...ಆ...
ಯೋಗಿ ಮನೆಗೆ ಬಂದ ಶ್ರೀ ಗುರುದೇವ ಮನೆಗೆ ಬಂದ
ಕಾಲಲಿ ಪಾದುಕೆ ಕೈಯಲಿ ದಂಡ ಬಾಲರವಿಯ ಕಳೆಯ ಆ....ಆ...ಆ...
*****************************************************************